ಉಪನ್ಯಾಸ ಕಾರ್ಯಕ್ರಮ – ಹೊನ್ನಾವರ ತಾಲೂಕಿನ ಶಾಸನಗಳು ಮತ್ತು ಇತಿಹಾಸ
ದಿನಾಂಕ 25.9.2026, ಶುಕ್ರವಾರ, 11.30 ಗಂಟೆಗೆ ಶ್ರೀ ಆರ್.ಎಸ್. ಹೆಗಡೆ ಸಭಾಭವನ,
ಎಸ್.ಡಿ.ಎಂ. ಪದವಿ ಕಾಲೇಜು ಹೊನ್ನಾವರ.
ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಇತಿಹಾಸ ಸಂಘ ಹಾಗೂ ಪರಂಪರಾ ಕೂಟದ ಸಂಯುಕ್ತ ಆಶ್ರಯದಲ್ಲಿ “ಹೊನ್ನಾವರ ತಾಲೂಕಿನ ಶಾಸನಗಳು ಮತ್ತು ಇತಿಹಾಸ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಉಪನ್ಯಾಸಕರು: ಇತಿಹಾಸ ಸಂಶೋಧಕರು ಹಾಗೂ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶ್ರೀ ಶ್ಯಾಮಸುಂದರ ಗೌಡ ಅಂಕೋಲಾ ಅವರು ಮುಖ್ಯ ಉಪನ್ಯಾಸಕರಾಗಿ ಆಗಮಿಸಿ, ಹೊನ್ನಾವರ ತಾಲೂಕಿನ ಐತಿಹಾಸಿಕ ಹಿನ್ನೆಲೆ, ಪ್ರಮುಖ ಶಾಸನಗಳು ಹಾಗೂ ಸ್ಥಳೀಯ ಇತಿಹಾಸದ ಮಹತ್ವದ ಕುರಿತು ವಿಷಯ ಮಂಡಿಸಿದರು.
ಅಧ್ಯಕ್ಷತೆ: ಕಾಲೇಜಿನ ಪ್ರಾಚಾರ್ಯರಾದ ಡಾ. ಜಿ. ಎನ್. ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಗೌರವಾನ್ವಿತ ಉಪಸ್ಥಿತಿ: ಇತಿಹಾಸ ವಿಭಾಗ ಹಾಗೂ ಪರಂಪರಾ ಕೂಟದ ಮುಖ್ಯಸ್ಥರಾದ ಡಾ. ಮಂಜುನಾಥ ವಿ. ಭಂಡಾರಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇತಿಹಾಸ ಸಂಘದ ಅಧ್ಯಕ್ಷರಾದ ಕು. ಧನ್ಯಶ್ರೀ ನಾಯ್ಕ (5ನೇ ಸೆಮಿಸ್ಟರ್), ಪರಂಪರಾ ಕೂಟದ ಅಧ್ಯಕ್ಷರಾದ ಕು. ನಿತೇಶ ಗೌಡ (5ನೇ ಸೆಮಿಸ್ಟರ್), ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.