ವಿದ್ಯಾರ್ಥಿಯು ತನಗೆ ಸಂಬಂಧಿಸಿದ ಎಲ್ಲ ತರಗತಿಗಳಿಗೂ ಹಾಜರಿರಬೇಕು ಹಾಗೂ ಕ.ವಿ.ವಿ. ನಿಯಮದಂತೆ ಎಲ್ಲಾ ತರಗತಿಗಳಿಗೂ ಶೇಕಡಾ 75 ರಷ್ಟು ಕನಿಷ್ಠ ಹಾಜರಾತಿ ಇರಬೇಕು.
ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಸೆಮಿಸ್ಟರ ತರಗತಿಗಳಿಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುವದು. ಈ ಎಲ್ಲ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕು.
ತರಗತಿಗಳು ನಡೆಯುವಾಗ ವಿದ್ಯಾರ್ಥಿಗಳು ವರಾಂಡದ ಮೇಲೆ ತಿರುಗುವುದು ದಂಡನಾರ್ಹ ಅಪರಾಧವಾಗಿರುತ್ತದೆ.
ರ್ಯಾಗಿಂಗ್ (ಮೋಜಿಗಾಗಿ ಪೀಡಿಸುವುದು) ನಿಷೇಧ. ಯು.ಜಿ.ಸಿ ನಿಯಮಾವಳಿಯ ಪ್ರಕಾರ ಕಾಲೇಜಿನಲ್ಲಿ ರ್ಯಾಗಿಂಗ್ನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಕೆಳಗಿನ ಕೃತಗಳು ರ್ಯಾಗಿಂಗ್ ವ್ಯಾಪ್ತಿಯೊಳಗೆ ಬರುತ್ತವೆ. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರಿಗೆ
ಮಾತಿನ ಮೂಲಕ ಅಥವಾ ಬರವಣಿಗೆಯ ಮೂಲಕ ಅಪಹಾಸ್ಯ ಮಾಡುವುದು
ಅಶಿಸ್ತಿನ ಕೃತ್ಯದ ಮೂಲಕ ಕಿರಿಕಿರಿಯನ್ನುಂಟು ಮಾಡುವುದು.
ಅವಮಾನಿಸುವ ಅಥವಾ ಹಿಂಸಿಸುವ ರೀತಿಯಲ್ಲಿ ವರ್ತಿಸುವುದು.
ಅಶ್ಲೀಲ ರೀತಿಯಲ್ಲಿ ನಡೆದುಕೊಳ್ಳುವಂತೆ ಒತ್ತಾಯಿಸುವುದು. ಇಂತಹ ಕೃತ್ಯಗಳಲ್ಲಿ ತೊಡಗುವ ವಿದ್ಯಾರ್ಥಿಗಳ ವಿರುದ್ದ ಈ ಕೆಳಗಿನ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ತರಗತಿಯಿಂದ ಅಮಾನತು
ಕಾಲೇಜಿನಿಂದ ನೀಡಲಾಗಿರುವ ಸೌಲಭ್ಯಗಳನ್ನು ಹಿಂಪಡೆಯುವುದು
ಪರೀಕ್ಷೆಗಳಿಗೆ ಕುಳಿತುಕೊಳ್ಳದಂತೆ ತಡೆಯುವುದು.
ಮಹಾವಿದ್ಯಾಲಯದ ವಸತಿ ನಿಲಯದಿಂದ ಪ್ರವೇಶ ರದ್ದು ಪಡಿಸುವುದು.
ಆಯಾ ತರಗತಿಗಳಿಗೆ ನೀಡಿದ ಪ್ರವೇಶವನ್ನು ರದ್ದು ಪಡಿಸುವುದು.
ಪ್ರತಿ ಸ್ನಾತಕ ವಿದ್ಯಾರ್ಥಿಯು ತನ್ನ ಭಾವಚಿತ್ರ ಅಚಿಟಿಸಿದ ಗುರುತಿನ ಚೀಟಿಯನ್ನು ಸದಾ ತನ್ನೊಂದಿಗೆ ಇಟ್ಟುಕೊಂಡಿರಬೇಕು. ಕ್ಯಾಂಪಸ್ ಕಾರ್ಡನ್ನು ತಪ್ಪದೇ ಧರಿಸಿಕೊಂಡಿರಬೇಕು ಮಹಾವಿದ್ಯಾಲಯದ ಯಾವುದೇ ಸಿಬ್ಬಂದಿ ವಿಚಾರಿಸಿದರೆ ಅದನ್ನು ತೋರಿಸಬೇಕು. ಗುರುತಿನ ಚೀಟಿ ಕಳೆದುಕೊಂಡರೆ ರೂ.100/-ನ್ನು ಕಾಲೇಜಿನ ಕಛೇರಿಯಲ್ಲಿ ತುಂಬಿ ಬದಲಿ ಗುರುತಿನ ಚೀಟಿ ಪಡೆದುಕೊಳ್ಳಬೇಕು.ಬದಲಿ ಗುರುತಿನ ಚೀಟಿ ಕೊಡುವ ಯಾ ಬಿಡುವ ಅಧಿಕಾರ ಪ್ರಾಚಾರ್ಯರಿಗಿದೆ.
ಕಾಲೇಜು ಸಿಬ್ಬಂದಿಗಳ ಹಾಗೂ ಇತರ ವಿದ್ಯಾರ್ಥಿಗಳ ಸಂಗಡ ಸಭ್ಯತೆಯಿಂದ ವರ್ತಿಸಬೇಕು. ಕಾಲೇಜು ಆವಾರದಲ್ಲಿ ಯಾವುದೇ ಗಲಾಟೆಯನ್ನು ಮಾಡದೇ ಶಾಂತತೆಯನ್ನು ಕಾಯ್ದುಕೊಳ್ಳಬೇಕು.
ಕಾಲೇಜಿನ ಯಾವುದೇ ಆಸ್ತಿಯನ್ನು ಕೆಡಿಸುವ ಯಾ ವಿರೂಪಗೊಳಿಸುವ ಕೃತ್ಯ ದಂಡನಾರ್ಹ.
ಮಹಾವಿದ್ಯಾಲಯದ ವಾಹನ ನಿಲುಗಡೆ ಸ್ಥಳದಲ್ಲಿ ವಿದ್ಯಾರ್ಥಿಗಳು ನಿಲ್ಲುವುದಾಗಲಿ ಅಥವಾ ಕೂಡ್ರುವುದನ್ನು ನಿಷೇಧಿಸಲಾಗಿದೆ.
ಬೀಡಿ,ಸಿಗರೇಟ್, ತಂಬಾಕು,ಗುಟಕಾ ಸೇವನೆ,ಮದ್ಯ ಸೇವನೆಗಳಂತಹ ಕೆಟ್ಟ ಚಟಗಳನ್ನು ಕಾಲೇಜು ಆವಾರದಲ್ಲಿ ನಿಷೇಧಿಸಿದೆ.ನಿಯಮಗಳನ್ನು ಮುರಿದಲ್ಲಿ ಶಿಕ್ಷೆಗೆ ಒಳಪಡಿಸಲಾಗುವುದು.
ಸ್ಪೋಟಕ ವಸ್ತುಗಳನ್ನು ಕಾಲೇಜಿಗೆ ತರುವುದಾಗಲಿ /ಸ್ಪೋಟಿಸುವುದಾಗಲಿ ನಿಷೇಧಿಸಲಾಗಿದೆ.
ವಿದ್ಯಾರ್ಥಿಗಳು ವರ್ಷದ ಮಧ್ಯಂತರದಲ್ಲಿ ಕಾಲೇಜು ಬಿಡುವುದಾದಲ್ಲಿ ಪ್ರಾಚಾರ್ಯರಿಗೆ ಲಿಖಿತವಾಗಿ ತಿಳಿಸಿ ಮಂಜೂರಿ ಪಡೆದುಕೊಳ್ಳಬೇಕು ಹಾಗೂ ಅವರು ಕಾಲೇಜಿನ ಎಲ್ಲಾ ಶುಲ್ಕ ತುಂಬಿ ಟಿ.ಸಿ ಪಡೆದುಕೊಳ್ಳಬೇಕು. ಮತ್ತು ಮಧ್ಯಂತರದಲ್ಲಿ ಕಾಲೇಜು ಬಿಟ್ಟು ಬೇರೆ ಕೋರ್ಸಿಗೆ ಹೋಗುವವರು ಯಾವುದೇ ಸ್ಕಾಲರ್ಶಿಫ್ಗಳಿಗೆ ಅರ್ಹರಿರುವುದಿಲ್ಲ.
ವಿದ್ಯಾರ್ಥಿ – ವಿದ್ಯಾರ್ಥಿನಿಯರು ಕಾಲೇಜಿನ ಆವಾರದಲ್ಲಿ ಮೊಬೈಲ್ ಪೋನ್ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ತರಗತಿಗಳನ್ನು ರದ್ದು ಪಡಿಸಿ, ಕಾರ್ಯಕ್ರಮಗಳನ್ನು ಏರ್ಪಡಿಸಿದಲ್ಲಿ, ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಅವಶ್ಯವಾಗಿ ಹಾಜರಿರಬೇಕು.
ಕಲಾ,ವಿಜ್ಞಾನ , ವಾಣಿಜ್ಯ, ವ್ಯವಹಾರ ಆಡಳಿತ, ಬಿ.ಸಿ.ಎ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಯಾ ವಿಭಾಗಕ್ಕೆ ನಿಗದಿ ಪಡಿಸಿದ ಸಮವಸ್ತ್ರವನ್ನು ವಾರದ ಎಲ್ಲಾ ದಿನಗಳಲ್ಲಿ ಧರಿಸಬೇಕು.ಅಲ್ಲದೇ ಮಹಾವಿದ್ಯಾಲಯದಲ್ಲಿ ಜರಗುವ ಎಲ್ಲ ಕಾರ್ಯಕ್ರಮಗಳಲ್ಲಿ (ರಜಾದಿನದಲ್ಲೂ ನಡೆಯುವ ತರಗತಿ ಹಾಗೂ ಕಾರ್ಯಕ್ರಮಗಳಿಗೆ ಅನ್ವಯಿಸುವಂತೆ) ಸಮವಸ್ತ್ರವನ್ನು ಧರಿಸುವುದು ಕಡ್ಡಾಯ.
ಕಾಲೇಜಿನಲ್ಲಿ ಪಾಲಕರ ಸಭೆಯನ್ನು ಕರೆದ ವೇಳೆಯಲ್ಲಿ ತಪ್ಪದೆ ಸಭೆಗೆ ಹಾಜರಾಗಿ ಸೂಕ್ತ ಸಲಹೆ ನೀಡಿ ಸಹಕರಿಸಬೇಕು. ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕೆಂದು ನಮ್ಮ ಅಪೇಕ್ಷೆ.
ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿಗೆ ಬರುವಾಗ ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳನ್ನು ತಂದರೆ ಅಂಥ ವಾಹನಗಳನ್ನು ಕಾಲೇಜಿನ ಆವಾರದಲ್ಲಿ ವಿದ್ಯಾರ್ಥಿಗಳಿಗೆ ನಿಗದಿಗೊಳಿಸಿದ ಸ್ಥಳದಲ್ಲಿಯೇ ನಿಲುಗಡೆ ಮಾಡಬೇಕು.
ಕಾಲೇಜಿನ ಸೂಚನಾ ಫಲಕವನ್ನು ವಿದ್ಯಾರ್ಥಿಗಳು ಪ್ರತಿದಿನ ಗಮನಿಸುತ್ತಿರಬೇಕು .ಕಾಲೇಜಿನಲ್ಲಿ ಸಲ್ಲಿಸಿದ ಹಣಕ್ಕೆ ಪಾವತಿ ಪಡೆಯಬೇಕು. ಮತ್ತು ಪಾವತಿ ರಶೀದಿಯನ್ನು ಕಾಯ್ದಿರಿಸಿಕೊಳ್ಳಬೇಕು.
ಯೂನಿಯನ್ –ಜಿಮಖಾನಾ ಕಾಲೇಜಿನ ಪಠ್ಯೇತರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ವಿದ್ಯಾರ್ಥಿ ಒಕ್ಕೂಟವನ್ನು (ಯೂನಿಯನ್ ಜಿಮಖಾನಾ) ಈ ಕೆಳಗಿನಂತೆ ರಚನೆಯನ್ನು ಮಾಡಲಾಗುತ್ತದೆ.
ಅ) ಅಧ್ಯಕ್ಷರು : ಪ್ರಾಚಾರ್ಯರು ಆ) ಉಪಾಧ್ಯಕ್ಷರು : ಓರ್ವ ಪ್ರಾಧ್ಯಾಪಕ (ಪ್ರಾಚಾರ್ಯರಿಂದ ನಿಯುಕ್ತ)
ಇ) ಮೂವರು ಸಲಹೆಗರು : ಪ್ರಾಚಾರ್ಯರಿಂದ ನಿಯುಕ್ತಗೊಳಿಸಲ್ಪಟ್ಟ ಪ್ರಾಧ್ಯಾಪಕರು
ಉ) ಕಾರ್ಯದರ್ಶಿಗಳು : (i) ಯೂನಿಯನ್ ಕಾರ್ಯದರ್ಶಿ (ಜನರಲ್ ಸೆಕ್ರೆಟರಿ)
(ii) ಕಲಾ ಬಳಗದ ಕಾರ್ಯದರ್ಶಿ
(iii) ಹೊರಾಂಗಣ ಕ್ರೀಡಾ ಕಾರ್ಯದರ್ಶಿ
(iv) ಒಳಾಂಗಣ ಕ್ರೀಡಾ ಕಾರ್ಯದರ್ಶಿ ಹಾಗೂ ವರ್ಗ ಪ್ರತಿನಿಧಿಗಳು
(v) ಗ್ರಂಥಾಲಯ ಕಾರ್ಯದರ್ಶಿ
ಪ್ರಜಾಪ್ರಭುತ್ವ ಪದ್ದತಿಯಂತೆ ಅಯಾ ತರಗತಿಗಳಲ್ಲಿಯೇ ವರ್ಗ ಪ್ರತಿನಿಧಿಗಳನ್ನು ಅತ್ಯಂತ ಸರಳ ವಿಧಾನದಿಂದ ಆಯ್ಕೆಮಾಡಲಾಗುವುದು. ಆಯ್ಕೆಯಾದ ವರ್ಗ ಪ್ರತಿನಿಧಿಗಳಿಂದ ಉಳಿದ ಕಾರ್ಯದರ್ಶಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗುವುದು.
ವಿದ್ಯಾರ್ಥಿ ಒಕ್ಕೂಟದ ಚುನಾವಣೆಯ ನಿಯಮಗಳು
ಕಾಲೇಜಿನ ನಿಯಮಕ್ಕೆ ವಿರುದ್ದವಾಗಿ ನಡೆದು, ಪ್ರಾಚಾರ್ಯರಿಗೆ ತಪ್ಪೊಪ್ಪಿಗೆ ಬರೆದು ಕೊಟ್ಟಿರುವಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
ವಿದ್ಯಾರ್ಥಿ ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಲು ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಶೇಕಡಾ 75 % ಹಾಜರಾತಿಯನ್ನು ಪೊರೈಸಿರಬೇಕು ಹಾಗೂ ಸೆಮಿಸ್ಟರ್ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.