ರಾಜ್ಯಮಟ್ಟದ, ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವೈಯಕ್ತಿಕ ಪ್ರಥಮ ಸ್ಥಾನ ಪಡೆದ, ವಿಶ್ವವಿದ್ಯಾನಿಲಯವನ್ನು, ರಾಜ್ಯವನ್ನು ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ‘ಮೆರಿಟೋರಿಯಸ್’ ಬಹುಮಾನ ನೀಡಲಾಗುವುದು. ಅಂತಹ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ವಿದ್ಯಾಭ್ಯಾಸದ ಅವಧಿಯಲ್ಲಿ ಅಭಿವೃದ್ಧಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು.
ಬಿ.ಎ.ಪ್ರಥಮ ವರ್ಷದ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಶುಲ್ಕದಿಂದ ವಿನಾಯತಿ ನೀಡಲಾಗಿದೆ. ನಂತರದ ವರ್ಷಗಳಲ್ಲಿ ಈ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳು ಕನಿಷ್ಟ ಶೇ.75ರಷ್ಟು ಅಂಕಗಳನ್ನು ಪಡೆಯತಕ್ಕದ್ದು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಅಥವಾ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ, ಬಿ.ಕಾಂ.,ಬಿ.ಬಿ.ಎ. ಮತ್ತು ಬಿ.ಸಿ.ಎ. ಪ್ರಥಮ ವರ್ಷದ ಪ್ರವೇಶ ಸಂದರ್ಭದಲ್ಲಿ ಅಭಿವೃದ್ಧಿ ಶುಲ್ಕದಲ್ಲಿ ರೂ.5000/- ರಿಯಾಯಿತಿ ನೀಡಲಾಗುವುದು. ನಂತರದ ವರ್ಷಗಳಗಲ್ಲಿ ಈ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳು ಕನಿಷ್ಟ ಶೇ.85ರಷ್ಟು ಅಂಕಗಳನ್ನು ಪಡೆಯತಕ್ಕದ್ದು.
ಸುಮಾರು 50,000 ಕ್ಕಿಂತ ಹೆಚ್ಚು ಗ್ರಂಥವನ್ನು ಹೊಂದಿರುವ ಸುಸಜ್ಜಿತ ಗ್ರಂಥಾಲಯವಿದೆ. ಇದರಲ್ಲಿ ಛಾಯಾಪ್ರತಿ (Photo Copy), Inflibnet, Internet ಹಾಗೂ Book Bank ಸೌಲಭ್ಯವಿದೆ.
ಕಾಲೇಜಿನಲ್ಲಿ ವಿದ್ಯಾರ್ಥಿ ಗ್ರಾಹಕರ ಸಂಘವು ಇದ್ದು, ಉಪಯುಕ್ತವಾದ ಲೇಖನ ಸಾಮಾಗ್ರಿಗಳನ್ನು ಮತ್ತು ಕ್ರೀಡಾ ಸಾಮಾಗ್ರಿಗಳನ್ನು ಯೋಗ್ಯ ದರದಲ್ಲಿ ಪೂರೈಸಲಾಗುತ್ತದೆ. ಇಲ್ಲಿ ಛಾಯಾಪ್ರತಿ (Photo Copy) ಸೌಲಭ್ಯವಿರುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು.
ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ವಿವಿಧ ವಿಷಯಗಳ ಮೇಲೆ ತಜ್ಞರನ್ನು ಕರೆಯಿಸಿ, ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ.
ಸಾಂಸ್ಕೃತಿಕ ಚಟುವಟಿಕೆಗಳಾದ ನಾಟಕ, ಏಕಪಾತ್ರಾಭಿನಯ, ಪ್ರಹಸನ, ಸಂಗೀತ, ನೃತ್ಯ, ಯಕ್ಷಗಾನ, ಭಾಷಣಕಲೆ, ಇತ್ಯಾದಿಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು.
ಕ್ರೀಡೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಿಂದ ತರಬೇತಿ ನೀಡುವ ವ್ಯವಸ್ಥೆ ಇರುತ್ತದೆ.
ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯದ ಸೌಲಭ್ಯವಿದೆ.
ಅಂತರ್ಜಾಲ ಸೌಲಭ್ಯ ಸಮಯಕ್ಕೆ ಅನುಸಾರ ಒದಗಿಸಿಕೊಡಬೇಕು.
ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆ – ವಿದ್ಯಾ ಸಂಜೀವಿನಿ ಕ್ಷೇಮಾಭಿವೃದ್ಧಿ ನಿಧಿ (ಎಂಪಿಇ ಸೊಸೈಟಿಯ ಆಡಳಿತ ಮಂಡಳಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಆರ್ಥಿಕ ನೆರವಿನ ಯೋಜನೆಯಾಗಿದೆ.)