Welcome to MPE Society's SDM College
1950 ರ ದಶಕದಲ್ಲಿ ಹೊನ್ನಾವರ ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಜನರು ಉನ್ನತ ಶಿಕ್ಷಣಕ್ಕಾಗಿ ದೂರದ ನಗರಗಳಿಗೆ ಹೋಗಬೇಕಾಗಿತ್ತು. ಈ ಪರಿಸ್ಥಿತಿಯನ್ನು ಹೋಗಲಾಡಿಸಲು ಶಿಕ್ಷಣ ಪ್ರೇಮಿಗಳಾದ ದಿ| ಶ್ರೀ ಆರ್.ಎಸ್. ಹೆಗಡೆಯವರ ನೇತೃತ್ವದಲ್ಲಿ 1963ರಲ್ಲಿ ಎಂ.ಪಿ.ಇ. ಸೊಸೈಟಿ ಸ್ಥಾಪನೆಗೊಂಡಿತು.
1964ರಲ್ಲಿ ಎಂ.ಪಿ.ಇ. ಸೊಸೈಟಿಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಪ್ರಾರಂಭವಾಗಿ 1976ರಲ್ಲಿ ವಾಣಿಜ್ಯ ಶಿಕ್ಷಣವನ್ನು ಆರಂಭಿಸಲಾಯಿತು. ದಿ| ಆರ್.ಎಸ್. ಹೆಗಡೆಯವರು ಸಂಸ್ಥಾಪಕ ಅಧ್ಯಕ್ಷರಾಗಿಯೂ ಮತ್ತು ನಾಡಿನ ಖ್ಯಾತ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರಾದ ದಿ| ಶ್ರೀ ವಿ. ಸೀತಾರಾಮಯ್ಯನವರು ಪ್ರಥಮ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಮಹಾವಿದ್ಯಾಲಯಕ್ಕೆ ಭದ್ರ ಬುನಾದಿಯನ್ನು ಒದಗಿಸಿದರು.
Apply for Admission
We don’t just give students an education and experiences that set them up for success in a career. We help them succeed in their career—to discover a field they’re passionate about and dare to lead it.