College Particulars

ಮಹಾವಿದ್ಯಾಲಯದ ನಿಯಮಗಳು

  • ವಿದ್ಯಾರ್ಥಿಯು ತನಗೆ ಸಂಬಂಧಿಸಿದ ಎಲ್ಲ ತರಗತಿಗಳಿಗೂ ಹಾಜರಿರಬೇಕು ಹಾಗೂ ಕ.ವಿ.ವಿ. ನಿಯಮದಂತೆ ಎಲ್ಲಾ ತರಗತಿಗಳಿಗೂ ಶೇಕಡಾ 75 ರಷ್ಟು ಕನಿಷ್ಠ ಹಾಜರಾತಿ ಇರಬೇಕು.
  • ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಸೆಮಿಸ್ಟರ ತರಗತಿಗಳಿಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುವದು. ಈ ಎಲ್ಲ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕು.
  • ತರಗತಿಗಳು ನಡೆಯುವಾಗ ವಿದ್ಯಾರ್ಥಿಗಳು ವರಾಂಡದ ಮೇಲೆ ತಿರುಗುವುದು ದಂಡನಾರ್ಹ ಅಪರಾಧವಾಗಿರುತ್ತದೆ.
  • ರ್ಯಾಗಿಂಗ್ (ಮೋಜಿಗಾಗಿ ಪೀಡಿಸುವುದು) ನಿಷೇಧ.
    ಯು.ಜಿ.ಸಿ ನಿಯಮಾವಳಿಯ ಪ್ರಕಾರ ಕಾಲೇಜಿನಲ್ಲಿ ರ್ಯಾಗಿಂಗ್‍ನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಕೆಳಗಿನ ಕೃತಗಳು ರ್ಯಾಗಿಂಗ್ ವ್ಯಾಪ್ತಿಯೊಳಗೆ ಬರುತ್ತವೆ.
    ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರಿಗೆ
    • ಮಾತಿನ ಮೂಲಕ ಅಥವಾ ಬರವಣಿಗೆಯ ಮೂಲಕ ಅಪಹಾಸ್ಯ ಮಾಡುವುದು
    • ಅಶಿಸ್ತಿನ ಕೃತ್ಯದ ಮೂಲಕ ಕಿರಿಕಿರಿಯನ್ನುಂಟು ಮಾಡುವುದು.
    • ಅವಮಾನಿಸುವ ಅಥವಾ ಹಿಂಸಿಸುವ ರೀತಿಯಲ್ಲಿ ವರ್ತಿಸುವುದು.
    • ಅಶ್ಲೀಲ ರೀತಿಯಲ್ಲಿ ನಡೆದುಕೊಳ್ಳುವಂತೆ ಒತ್ತಾಯಿಸುವುದು.
      ಇಂತಹ ಕೃತ್ಯಗಳಲ್ಲಿ ತೊಡಗುವ ವಿದ್ಯಾರ್ಥಿಗಳ ವಿರುದ್ದ ಈ ಕೆಳಗಿನ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
    • ತರಗತಿಯಿಂದ ಅಮಾನತು
    • ಕಾಲೇಜಿನಿಂದ ನೀಡಲಾಗಿರುವ ಸೌಲಭ್ಯಗಳನ್ನು ಹಿಂಪಡೆಯುವುದು
    • ಪರೀಕ್ಷೆಗಳಿಗೆ ಕುಳಿತುಕೊಳ್ಳದಂತೆ ತಡೆಯುವುದು.
    • ಮಹಾವಿದ್ಯಾಲಯದ ವಸತಿ ನಿಲಯದಿಂದ ಪ್ರವೇಶ ರದ್ದು ಪಡಿಸುವುದು.
    • ಆಯಾ ತರಗತಿಗಳಿಗೆ ನೀಡಿದ ಪ್ರವೇಶವನ್ನು ರದ್ದು ಪಡಿಸುವುದು.
  • ಪ್ರತಿ ಸ್ನಾತಕ ವಿದ್ಯಾರ್ಥಿಯು ತನ್ನ ಭಾವಚಿತ್ರ ಅಚಿಟಿಸಿದ ಗುರುತಿನ ಚೀಟಿಯನ್ನು ಸದಾ ತನ್ನೊಂದಿಗೆ ಇಟ್ಟುಕೊಂಡಿರಬೇಕು. ಕ್ಯಾಂಪಸ್ ಕಾರ್ಡನ್ನು ತಪ್ಪದೇ ಧರಿಸಿಕೊಂಡಿರಬೇಕು ಮಹಾವಿದ್ಯಾಲಯದ ಯಾವುದೇ ಸಿಬ್ಬಂದಿ ವಿಚಾರಿಸಿದರೆ ಅದನ್ನು ತೋರಿಸಬೇಕು. ಗುರುತಿನ ಚೀಟಿ ಕಳೆದುಕೊಂಡರೆ ರೂ.100/-ನ್ನು ಕಾಲೇಜಿನ ಕಛೇರಿಯಲ್ಲಿ ತುಂಬಿ ಬದಲಿ ಗುರುತಿನ ಚೀಟಿ ಪಡೆದುಕೊಳ್ಳಬೇಕು.ಬದಲಿ ಗುರುತಿನ ಚೀಟಿ ಕೊಡುವ ಯಾ ಬಿಡುವ ಅಧಿಕಾರ ಪ್ರಾಚಾರ್ಯರಿಗಿದೆ.
  • ಕಾಲೇಜು ಸಿಬ್ಬಂದಿಗಳ ಹಾಗೂ ಇತರ ವಿದ್ಯಾರ್ಥಿಗಳ ಸಂಗಡ ಸಭ್ಯತೆಯಿಂದ ವರ್ತಿಸಬೇಕು. ಕಾಲೇಜು ಆವಾರದಲ್ಲಿ ಯಾವುದೇ ಗಲಾಟೆಯನ್ನು ಮಾಡದೇ ಶಾಂತತೆಯನ್ನು ಕಾಯ್ದುಕೊಳ್ಳಬೇಕು.
  • ಕಾಲೇಜಿನ ಯಾವುದೇ ಆಸ್ತಿಯನ್ನು ಕೆಡಿಸುವ ಯಾ ವಿರೂಪಗೊಳಿಸುವ ಕೃತ್ಯ ದಂಡನಾರ್ಹ.
  • ಮಹಾವಿದ್ಯಾಲಯದ ವಾಹನ ನಿಲುಗಡೆ ಸ್ಥಳದಲ್ಲಿ ವಿದ್ಯಾರ್ಥಿಗಳು ನಿಲ್ಲುವುದಾಗಲಿ ಅಥವಾ ಕೂಡ್ರುವುದನ್ನು ನಿಷೇಧಿಸಲಾಗಿದೆ.
  • ಬೀಡಿ,ಸಿಗರೇಟ್, ತಂಬಾಕು,ಗುಟಕಾ ಸೇವನೆ,ಮದ್ಯ ಸೇವನೆಗಳಂತಹ ಕೆಟ್ಟ ಚಟಗಳನ್ನು ಕಾಲೇಜು ಆವಾರದಲ್ಲಿ ನಿಷೇಧಿಸಿದೆ.ನಿಯಮಗಳನ್ನು ಮುರಿದಲ್ಲಿ ಶಿಕ್ಷೆಗೆ ಒಳಪಡಿಸಲಾಗುವುದು.
  • ಸ್ಪೋಟಕ ವಸ್ತುಗಳನ್ನು ಕಾಲೇಜಿಗೆ ತರುವುದಾಗಲಿ /ಸ್ಪೋಟಿಸುವುದಾಗಲಿ ನಿಷೇಧಿಸಲಾಗಿದೆ.
  • ವಿದ್ಯಾರ್ಥಿಗಳು ವರ್ಷದ ಮಧ್ಯಂತರದಲ್ಲಿ ಕಾಲೇಜು ಬಿಡುವುದಾದಲ್ಲಿ ಪ್ರಾಚಾರ್ಯರಿಗೆ ಲಿಖಿತವಾಗಿ ತಿಳಿಸಿ ಮಂಜೂರಿ ಪಡೆದುಕೊಳ್ಳಬೇಕು ಹಾಗೂ ಅವರು ಕಾಲೇಜಿನ ಎಲ್ಲಾ ಶುಲ್ಕ ತುಂಬಿ ಟಿ.ಸಿ ಪಡೆದುಕೊಳ್ಳಬೇಕು. ಮತ್ತು ಮಧ್ಯಂತರದಲ್ಲಿ ಕಾಲೇಜು ಬಿಟ್ಟು ಬೇರೆ ಕೋರ್ಸಿಗೆ ಹೋಗುವವರು ಯಾವುದೇ ಸ್ಕಾಲರ್‍ಶಿಫ್‍ಗಳಿಗೆ ಅರ್ಹರಿರುವುದಿಲ್ಲ.
  • ವಿದ್ಯಾರ್ಥಿ – ವಿದ್ಯಾರ್ಥಿನಿಯರು ಕಾಲೇಜಿನ ಆವಾರದಲ್ಲಿ ಮೊಬೈಲ್ ಪೋನ್ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
  • ತರಗತಿಗಳನ್ನು ರದ್ದು ಪಡಿಸಿ, ಕಾರ್ಯಕ್ರಮಗಳನ್ನು ಏರ್ಪಡಿಸಿದಲ್ಲಿ, ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಅವಶ್ಯವಾಗಿ ಹಾಜರಿರಬೇಕು.
  • ಕಲಾ,ವಿಜ್ಞಾನ , ವಾಣಿಜ್ಯ, ವ್ಯವಹಾರ ಆಡಳಿತ, ಬಿ.ಸಿ.ಎ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಯಾ ವಿಭಾಗಕ್ಕೆ ನಿಗದಿ ಪಡಿಸಿದ ಸಮವಸ್ತ್ರವನ್ನು ವಾರದ ಎಲ್ಲಾ ದಿನಗಳಲ್ಲಿ ಧರಿಸಬೇಕು.ಅಲ್ಲದೇ ಮಹಾವಿದ್ಯಾಲಯದಲ್ಲಿ ಜರಗುವ ಎಲ್ಲ ಕಾರ್ಯಕ್ರಮಗಳಲ್ಲಿ (ರಜಾದಿನದಲ್ಲೂ ನಡೆಯುವ ತರಗತಿ ಹಾಗೂ ಕಾರ್ಯಕ್ರಮಗಳಿಗೆ ಅನ್ವಯಿಸುವಂತೆ) ಸಮವಸ್ತ್ರವನ್ನು ಧರಿಸುವುದು ಕಡ್ಡಾಯ.
  • ಕಾಲೇಜಿನಲ್ಲಿ ಪಾಲಕರ ಸಭೆಯನ್ನು ಕರೆದ ವೇಳೆಯಲ್ಲಿ ತಪ್ಪದೆ ಸಭೆಗೆ ಹಾಜರಾಗಿ ಸೂಕ್ತ ಸಲಹೆ ನೀಡಿ ಸಹಕರಿಸಬೇಕು. ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕೆಂದು ನಮ್ಮ ಅಪೇಕ್ಷೆ.
  • ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿಗೆ ಬರುವಾಗ ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳನ್ನು ತಂದರೆ ಅಂಥ ವಾಹನಗಳನ್ನು ಕಾಲೇಜಿನ ಆವಾರದಲ್ಲಿ ವಿದ್ಯಾರ್ಥಿಗಳಿಗೆ ನಿಗದಿಗೊಳಿಸಿದ ಸ್ಥಳದಲ್ಲಿಯೇ ನಿಲುಗಡೆ ಮಾಡಬೇಕು.
  • ಕಾಲೇಜಿನ ಸೂಚನಾ ಫಲಕವನ್ನು ವಿದ್ಯಾರ್ಥಿಗಳು ಪ್ರತಿದಿನ ಗಮನಿಸುತ್ತಿರಬೇಕು .ಕಾಲೇಜಿನಲ್ಲಿ ಸಲ್ಲಿಸಿದ ಹಣಕ್ಕೆ ಪಾವತಿ ಪಡೆಯಬೇಕು. ಮತ್ತು ಪಾವತಿ ರಶೀದಿಯನ್ನು ಕಾಯ್ದಿರಿಸಿಕೊಳ್ಳಬೇಕು.
  • ಯೂನಿಯನ್ –ಜಿಮಖಾನಾ ಕಾಲೇಜಿನ ಪಠ್ಯೇತರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ವಿದ್ಯಾರ್ಥಿ ಒಕ್ಕೂಟವನ್ನು (ಯೂನಿಯನ್ ಜಿಮಖಾನಾ) ಈ ಕೆಳಗಿನಂತೆ ರಚನೆಯನ್ನು ಮಾಡಲಾಗುತ್ತದೆ.
    • ಅ) ಅಧ್ಯಕ್ಷರು : ಪ್ರಾಚಾರ್ಯರು ಆ) ಉಪಾಧ್ಯಕ್ಷರು : ಓರ್ವ ಪ್ರಾಧ್ಯಾಪಕ (ಪ್ರಾಚಾರ್ಯರಿಂದ ನಿಯುಕ್ತ)
    • ಇ) ಮೂವರು ಸಲಹೆಗರು : ಪ್ರಾಚಾರ್ಯರಿಂದ ನಿಯುಕ್ತಗೊಳಿಸಲ್ಪಟ್ಟ ಪ್ರಾಧ್ಯಾಪಕರು
    • ಉ) ಕಾರ್ಯದರ್ಶಿಗಳು : (i) ಯೂನಿಯನ್ ಕಾರ್ಯದರ್ಶಿ (ಜನರಲ್ ಸೆಕ್ರೆಟರಿ)
      (ii) ಕಲಾ ಬಳಗದ ಕಾರ್ಯದರ್ಶಿ
      (iii) ಹೊರಾಂಗಣ ಕ್ರೀಡಾ ಕಾರ್ಯದರ್ಶಿ
      (iv) ಒಳಾಂಗಣ ಕ್ರೀಡಾ ಕಾರ್ಯದರ್ಶಿ ಹಾಗೂ ವರ್ಗ ಪ್ರತಿನಿಧಿಗಳು
      (v) ಗ್ರಂಥಾಲಯ ಕಾರ್ಯದರ್ಶಿ
  • ಪ್ರಜಾಪ್ರಭುತ್ವ ಪದ್ದತಿಯಂತೆ ಅಯಾ ತರಗತಿಗಳಲ್ಲಿಯೇ ವರ್ಗ ಪ್ರತಿನಿಧಿಗಳನ್ನು ಅತ್ಯಂತ ಸರಳ ವಿಧಾನದಿಂದ ಆಯ್ಕೆಮಾಡಲಾಗುವುದು. ಆಯ್ಕೆಯಾದ ವರ್ಗ ಪ್ರತಿನಿಧಿಗಳಿಂದ ಉಳಿದ ಕಾರ್ಯದರ್ಶಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡಲಾಗುವುದು.

ವಿದ್ಯಾರ್ಥಿ ಒಕ್ಕೂಟದ ಚುನಾವಣೆಯ ನಿಯಮಗಳು

  • ಕಾಲೇಜಿನ ನಿಯಮಕ್ಕೆ ವಿರುದ್ದವಾಗಿ ನಡೆದು, ಪ್ರಾಚಾರ್ಯರಿಗೆ ತಪ್ಪೊಪ್ಪಿಗೆ ಬರೆದು ಕೊಟ್ಟಿರುವಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
  • ವಿದ್ಯಾರ್ಥಿ ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಲು ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಶೇಕಡಾ 75 % ಹಾಜರಾತಿಯನ್ನು ಪೊರೈಸಿರಬೇಕು ಹಾಗೂ ಸೆಮಿಸ್ಟರ್ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.