Academic Facility

ವಿಶೇಷ ಕಲಿಕಾ ಸೌಲಭ್ಯಗಳು

  • ರಾಜ್ಯಮಟ್ಟದ, ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವೈಯಕ್ತಿಕ ಪ್ರಥಮ ಸ್ಥಾನ ಪಡೆದ, ವಿಶ್ವವಿದ್ಯಾನಿಲಯವನ್ನು, ರಾಜ್ಯವನ್ನು ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ‘ಮೆರಿಟೋರಿಯಸ್’ ಬಹುಮಾನ ನೀಡಲಾಗುವುದು. ಅಂತಹ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ವಿದ್ಯಾಭ್ಯಾಸದ ಅವಧಿಯಲ್ಲಿ ಅಭಿವೃದ್ಧಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು.
  • ಬಿ.ಎ.ಪ್ರಥಮ ವರ್ಷದ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಶುಲ್ಕದಿಂದ ವಿನಾಯತಿ ನೀಡಲಾಗಿದೆ. ನಂತರದ ವರ್ಷಗಳಲ್ಲಿ ಈ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳು ಕನಿಷ್ಟ ಶೇ.75ರಷ್ಟು ಅಂಕಗಳನ್ನು ಪಡೆಯತಕ್ಕದ್ದು.
  • ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಅಥವಾ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ, ಬಿ.ಕಾಂ.,ಬಿ.ಬಿ.ಎ. ಮತ್ತು ಬಿ.ಸಿ.ಎ. ಪ್ರಥಮ ವರ್ಷದ ಪ್ರವೇಶ ಸಂದರ್ಭದಲ್ಲಿ ಅಭಿವೃದ್ಧಿ ಶುಲ್ಕದಲ್ಲಿ ರೂ.5000/- ರಿಯಾಯಿತಿ ನೀಡಲಾಗುವುದು. ನಂತರದ ವರ್ಷಗಳಗಲ್ಲಿ ಈ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳು ಕನಿಷ್ಟ ಶೇ.85ರಷ್ಟು ಅಂಕಗಳನ್ನು ಪಡೆಯತಕ್ಕದ್ದು.
  • ಸುಮಾರು 50,000 ಕ್ಕಿಂತ ಹೆಚ್ಚು ಗ್ರಂಥವನ್ನು ಹೊಂದಿರುವ ಸುಸಜ್ಜಿತ ಗ್ರಂಥಾಲಯವಿದೆ. ಇದರಲ್ಲಿ ಛಾಯಾಪ್ರತಿ (Photo Copy), Inflibnet, Internet ಹಾಗೂ Book Bank ಸೌಲಭ್ಯವಿದೆ.
  • ಕಾಲೇಜಿನಲ್ಲಿ ವಿದ್ಯಾರ್ಥಿ ಗ್ರಾಹಕರ ಸಂಘವು ಇದ್ದು, ಉಪಯುಕ್ತವಾದ ಲೇಖನ ಸಾಮಾಗ್ರಿಗಳನ್ನು ಮತ್ತು ಕ್ರೀಡಾ ಸಾಮಾಗ್ರಿಗಳನ್ನು ಯೋಗ್ಯ ದರದಲ್ಲಿ ಪೂರೈಸಲಾಗುತ್ತದೆ. ಇಲ್ಲಿ ಛಾಯಾಪ್ರತಿ (Photo Copy) ಸೌಲಭ್ಯವಿರುತ್ತದೆ.
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು.
  • ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ವಿವಿಧ ವಿಷಯಗಳ ಮೇಲೆ ತಜ್ಞರನ್ನು ಕರೆಯಿಸಿ, ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ.
  • ಸಾಂಸ್ಕೃತಿಕ ಚಟುವಟಿಕೆಗಳಾದ ನಾಟಕ, ಏಕಪಾತ್ರಾಭಿನಯ, ಪ್ರಹಸನ, ಸಂಗೀತ, ನೃತ್ಯ, ಯಕ್ಷಗಾನ, ಭಾಷಣಕಲೆ, ಇತ್ಯಾದಿಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು.
  • ಕ್ರೀಡೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಿಂದ ತರಬೇತಿ ನೀಡುವ ವ್ಯವಸ್ಥೆ ಇರುತ್ತದೆ.
  • ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯದ ಸೌಲಭ್ಯವಿದೆ.
  • ಅಂತರ್ಜಾಲ ಸೌಲಭ್ಯ ಸಮಯಕ್ಕೆ ಅನುಸಾರ ಒದಗಿಸಿಕೊಡಬೇಕು.
  • ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆ – ವಿದ್ಯಾ ಸಂಜೀವಿನಿ ಕ್ಷೇಮಾಭಿವೃದ್ಧಿ ನಿಧಿ (ಎಂಪಿಇ ಸೊಸೈಟಿಯ ಆಡಳಿತ ಮಂಡಳಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಆರ್ಥಿಕ ನೆರವಿನ ಯೋಜನೆಯಾಗಿದೆ.)